ಸೆರೆಬ್ರಲ್ ಪಾಲ್ಸಿ
ಮಿದುಳಿನ ಅಪಕ್ವ ಬೆಳವಣಿಗೆಯಿಂದ ಪ್ರಮುಖವಾಗಿ ಸ್ನಾಯುಗಳ ಸಮನ್ವಯತೆಯಲ್ಲಿ ಮತ್ತು ನಿಯಂತ್ರಣದಲ್ಲುಂಟಾಗುವ ತೊಂದರೆಯನ್ನು 'ಸರೆಬ್ರಲ್ ಪಾಲ್ಸಿ' ಎಂದು ಕರೆಯಲಾಗುತ್ತದೆ. ಹುಟ್ಟಿದಾಕ್ಷಣವೇ ಈ ಸ್ಥಿತಿಯಿದ್ದು ಜೀವನ ಪರ್ಯಂತ ವ್ಯಕ್ತಿಯನ್ನು ಅಸಮರ್ಥನನ್ನಾಗಿ ಮಾಡುತ್ತದೆ. ಮಿದುಳು ನಿಯಂತ್ರಣ ಮಾಡಲು ಅಶಕ್ತವಾಗಿರುತ್ತದೆ.
ಆಟಿಸಂ
ಬೆಳವಣಿಗೆಯ ರೋಗಗಳಲ್ಲಿ ಅತಿ ಪ್ರಮುಖವಾಗಿ ಮಾತು ಮತ್ತು ಭಾಷಾ ಬೆಳವಣಿಗೆಯಲ್ಲಿ ನ್ಯೂನತೆಯಿರುವ ರೋಗವೆಂದರೆ 'ಆಟಿಸಂ'. ಈ ರೋಗದ ಪ್ರಮುಖ ಲಕ್ಷಣಗಳೆಂದರೆ ಸಾಮಾಜಿಕ ಸಂಬಂಧಗಳ ಬೆಳವಣಿಗೆ ಅಸಮರ್ಪಕವಾಗಿರುವುದು, ಸಂವಹನ ಕ್ರಿಯೆಯಲ್ಲಿ ದೋಷವಿರುವುದು, ಮತ್ತು ಏಕರೂಪದ ಪುನರಾವರ್ತೀತ ವರ್ತನೆಗಳು. ಈ ಲಕ್ಷಣಗಳು ಸುಮಾರು ಮೂರು ವರ್ಷದ ಮೊದಲೇ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇವರ ಪೂರ್ವಬಾಲ್ಯಾವಧಿಯಲ್ಲಿ ಇತರ ಬೆಳವಣಿಗೆಗಳು ಸಾಮಾನ್ಯವಾಗಿದ್ದು, ಕ್ರಮೇಣ ಈ ಲಕ್ಷಣಗಳು ಬೆಳವಣಿಗೆಯಾಗುತ್ತವೆ.
No comments:
Post a Comment